
ಯಾದಗಿರಿಯಲ್ಲಿ ಅಂಬಿಗರ ಚೌಡಯ್ಯನವರ ಅವಹೇಳನದ ವಿರುದ್ಧ ಸಾವಿರಾರು ಜನರಿಂದ ಬೃಹತ್ ಪ್ರತಿಭಟನೆ ಮತ್ತು ST ಮೀಸಲಾತಿಗಾಗಿ ಹೋರಾಟ.
ಯಾದಗಿರಿ, ಸೆಪ್ಟೆಂಬರ್ 1:
ಅಂಬಿಗರ ಚೌಡಯ್ಯನವರ ವಿರುದ್ಧ ಅವಹೇಳನಕಾರಿಯಾದ ಹೇಳಿಕೆಗೆ ಆಕ್ರೋಶಗೊಂಡ ಕೋಲಿ ಹಾಗೂ ಕಬ್ಬಲೀಗ ಸಮುದಾಯದ ಸಾವಿರಾರು ಜನರು ಇಂದು ಯಾದಗಿರಿಯಲ್ಲಿನ ಸಾಗರೋಪಾದಿಯಲ್ಲಿ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಕಿಡಿಗೇಡಿಗಳು ಮಾಡಿರುವ ಅವಹೇಳನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಈ ಬೃಹತ್ ಪ್ರತಿಭಟನೆಗೆ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಅವರು ಭಾಗವಹಿಸಿದ್ದು, ಜನತೆಗೂ ಬಲವಾದ ಬೆಂಬಲ ನೀಡಿದರು. ಸಮುದಾಯದ ಗೌರವ ಹಾಗೂ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಯಿತು.
ಅಂಬಿಗರ ಚೌಡಯ್ಯನವರು ಸಮಾನತೆಯ ಪ್ರವರ್ತಕರಾಗಿದ್ದು, ಅವರನ್ನು ಅವಹೇಳನೆ ಮಾಡುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಈ ಬೃಹತ್ ಪ್ರತಿಭಟನೆ ಯಾದಗಿರಿ ನಗರದ ವಾಲ್ಮೀಕಿ ವೃತ್ತದಿಂದ ಸುಭಾಸ್ ವೃತ್ತದ ಮೂಲಕ ಸಾಗಿ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಸಮಾಜದ ಗಣ್ಯಾತಿಗಣ್ಯರು ಮತ್ತು ಪ್ರಮುಖ ಮುಖಂಡರು ಸೇರಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು.

