ಟೆಕ್ ದೈತ್ಯ ಆಪಲ್ ಕಂಪೆನಿಯು ಇತ್ತೀಚೆಗೆ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ ತನ್ನ ಹೊಸ iPhone 17 ಸರಣಿಯನ್ನು ಪರಿಚಯಿಸಿದೆ. ಈ ಬಾರಿ ಕಂಪನಿಯು iPhone 17, iPhone 17 Pro, iPhone 17 Pro Max ಹಾಗೂ ಸಂಪೂರ್ಣ ಹೊಸ ಮಾದರಿಯಾದ ಮತ್ತು ಆಪಲ್‌ನ ಅತಿ ಸ್ಲಿಮ್ ಫೋನ್ iPhone Air ಎಂಬ ಒಟ್ಟು ನಾಲ್ಕು ಐಫೋನ್ ಮಾದರಿಗಳನ್ನು ಬಿಡುಗಡೆ ಮಾಡಿದೆ. ಈ ಎಲ್ಲಾ ನಾಲ್ಕು ಐಫೋನ್‌ಗಳು ಮತ್ತು ಇತರೆ ಆಪಲ್ ಡಿವೈಸ್‌ಗಳು ಇದೀಗ ದೇಶದಲ್ಲಿ ಪ್ರೀ-ಆರ್ಡರ್ ಮಾಡಲು ಲಭ್ಯವಿವೆ.

ಭಾರತದಲ್ಲಿ ಪ್ರೀ-ಆರ್ಡರ್ ಆರಂಭ iPhone 17 ಸರಣಿಯ ಎಲ್ಲ ಮಾದರಿಗಳುಹಾಗೂ iPhone Air ಈಗ ಭಾರತದಲ್ಲಿ ಇಂದಿನಿಂದ ಪ್ರೀ-ಆರ್ಡರ್‌ಗಾಗಿ ಲಭ್ಯವಿವೆ. ಇದೇ ಸಂದರ್ಭದಲ್ಲಿ, ಆಪಲ್ ತನ್ನ ಹೊಸ Apple Watch Series 11, Watch Ultra 3, Watch SE 3 ಹಾಗೂ AirPods Pro 3 ಸಾಧನಗಳ ಪ್ರೀ-ಆರ್ಡರ್‌ಗಳನ್ನೂ ಸಹ ಆರಂಭಿಸಿದೆ. ಈ ಎಲ್ಲ ಸಾಧನಗಳು ಸೆಪ್ಟೆಂಬರ್ 19ರಿಂದ ಮಾರಾಟಕ್ಕೆ ಲಭ್ಯವಾಗಲಿವೆ. ಹಾಗಾದರೆ, ಭಾರತೀಯ ಮಾರುಕಟ್ಟೆಗೆ ಆಪಲ್ ಪ್ರಕಟಿಸಿರುವ ಬೆಲೆ ಪಟ್ಟಿ ಮತ್ತು ಪ್ರೀ-ಆರ್ಡರ್ ಮಾಡುವುದು ಹೇಗೆ ಎಂಬುದನ್ನು ನೋಡೋಣ ಬನ್ನಿ.
Price in India
· iPhone 17: 82,900 (256GB), 1,02,900 (512GB)
· iPhone 17 Pro: 1,34,900 (256GB), 1,54,900 (512GB)
· iPhone 17 Pro Max: 1,49,900 (256GB), 1,69,900 (512GB), 1,89,900 (1TB), 2,29,900 (2TB)
· iPhone Air: 1,19,900 (256GB), 1,39,900 (512GB), 1,59,900 (1TB)
Additionally, the Apple Watch Ultra 3 starts at 89,900, Apple Watch Series 11 at 46,900, Watch SE 3 at 25,900, and AirPods Pro 3 at 25,900.

ಆರ್ಡರ್ ಮಾಡುವ ವಿಧಾನ ಭಾರತೀಯ ಗ್ರಾಹಕರುನೇರವಾಗಿ Apple Store Online ಮೂಲಕ ಹೊಸ iPhone 17 ಸರಣಿ ಮತ್ತು iPhone Air ಅನ್ನು ಪ್ರೀ-ಆರ್ಡರ್ ಮಾಡಬಹುದು. ಇಲ್ಲಿ American Express, Axis Bank ಹಾಗೂ ICICI Bank ಕಾರ್ಡ್‌ಗಳ ಮೂಲಕ ಖರೀದಿ ಮಾಡಿದರೆ ತಕ್ಷಣದ ₹5,000 ರಿಯಾಯಿತಿ ಹಾಗೂ ಆರು ತಿಂಗಳವರೆಗೆ ಶೂನ್ಯ ಬಡ್ಡಿ EMI ಸೌಲಭ್ಯ ಸಿಗುತ್ತದೆ. ಸಪ್ಟೆಂಬರ್ 19 ರಿಂದ Flipkart, Amazon, Croma, Reliance Digital, Vijay Sales ಮತ್ತು Blinkit ಮುಂತಾದ ಪ್ರಮುಖ ಆನ್‌ಲೈನ್ ಹಾಗೂ ಆಫ್‌ಲೈನ್ ಮಳಿಗೆಗಳಲ್ಲಿಯೂ ಖರೀದಿಗೆ ಲಭ್ಯವಿರುತ್ತವೆ.
ಕಡಿಮೆ ಬೆಲೆಯ ಬೇಸಿಕ್ iPhone 17 ಹೇಗಿದೆ?..ಖರೀದಿಸಲು 10 ಕಾರಣಗಳು!ಕಡಿಮೆ ಬೆಲೆಯ ಬೇಸಿಕ್ iPhone 17 ಹೇಗಿದೆ?..ಖರೀದಿಸಲು 10 ಕಾರಣಗಳು!
ಆಪಲ್‌ನ ಹೊಸ iPhone 17 ಸರಣಿಯು ಈವರೆಗಿನ ಅತಿ ದೊಡ್ಡ ಅಪ್‌ಗ್ರೇಡ್‌ಗಳನ್ನು ಪಡೆದುಕೊಂಡಿದ್ದು, ಸ್ಟಾಂಡರ್ಡ್ ಮಾದರಿಯು ಅತ್ಯಂತ ಅಪ್‌ಗ್ರೇಡ್ ಆಗಿದೆ. ಹಾಗೆಯೇ, Pro ಮತ್ತು Pro Max ಮಾದರಿಗಳಿಗೆ ಹೆಚ್ಚು ಶಕ್ತಿಯುತ ಚಿಪ್ ಹಾಗೂ ಸುಧಾರಿತ ಕ್ಯಾಮೆರಾಗಳನ್ನು ನೀಡಲಾಗಿದೆ. iPhone Air ಅನ್ನು ಕಂಪನಿ ತನ್ನ ಅತ್ಯಂತ ತೆಳು ಮತ್ತು ಆಕರ್ಷಕ ಮಾದರಿಯಾಗಿ ಪರಿಚಯಿಸಿದ್ದು, ಇದು ನೇರವಾಗಿ Samsung Galaxy S25 Edge ಗೆ ಸ್ಪರ್ಧೆ ನೀಡುತ್ತಿದೆ. ಈ iPhone 17 ಸರಣಿಯಲ್ಲಿ ನೀವು ಕೂಡ ಹೊಸ ಐಫೋನ್ ಖರೀದಿಸಲು ಉತ್ಸುಕರಾಗಿದ್ದೀರಾ?. ಹಾಗಾದರೆ, ನಿಮ್ಮ ಆಯ್ಕೆಯ ಐಫೋನ್ ಯಾವುದು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.
ಪ್ರೀ-ಆರ್ಡರ್ ಮಾಡುವ ವಿಧಾನ ಭಾರತೀಯ ಗ್ರಾಹಕರುನೇರವಾಗಿ Apple Store Online ಮೂಲಕ ಹೊಸ iPhone 17 ಸರಣಿ ಮತ್ತು iPhone Air ಅನ್ನು ಪ್ರೀ-ಆರ್ಡರ್ ಮಾಡಬಹುದು. ಇಲ್ಲಿ American Express, Axis Bank ಹಾಗೂ ICICI Bank ಕಾರ್ಡ್‌ಗಳ ಮೂಲಕ ಖರೀದಿ ಮಾಡಿದರೆ ತಕ್ಷಣದ ₹5,000 ರಿಯಾಯಿತಿ ಹಾಗೂ ಆರು ತಿಂಗಳವರೆಗೆ ಶೂನ್ಯ ಬಡ್ಡಿ EMI ಸೌಲಭ್ಯ ಸಿಗುತ್ತದೆ. ಸಪ್ಟೆಂಬರ್ 19 ರಿಂದ Flipkart, Amazon, Croma, Reliance Digital, Vijay Sales ಮತ್ತು Blinkit ಮುಂತಾದ ಪ್ರಮುಖ ಆನ್‌ಲೈನ್ ಹಾಗೂ ಆಫ್‌ಲೈನ್ ಮಳಿಗೆಗಳಲ್ಲಿಯೂ ಖರೀದಿಗೆ ಲಭ್ಯವಿರುತ್ತವೆ.