• Wed. Sep 17th, 2025

Tv2 News Kannada

ನೇರ ನಿತ್ಯ ನಿರಂತರ ಸುದ್ದಿಗಳು

ಸರಣಿ ಬೈಕ್ ಕಳ್ಳರನ್ನು ಸೆರೆ ಹಿಡಿದ ವಿಜಯಪೂರ ಪೊಲೀಸರು.

SHARE

ವಿಜಯಪುರದಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡಿದ ಆರೋಪಿ ಜೋಡಿ ಬಂಧಿತವಾಗಿದೆ; 11 ಲಕ್ಷ ರೂಪಾಯಿ ಮೌಲ್ಯದ 17 ಬೈಕುಗಳು ಕಳ್ಳರಿಂದ ವಶ.

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ನಡೆದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಬಗೆಹರಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 11 ಲಕ್ಷ ರೂಪಾಯಿ ಮೌಲ್ಯದ 17 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರಾಗಿರುವ ಕಳ್ಳರು ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದ ವೀರಭದ್ರ ಶಿವಶರಣ ಕುಂಬಾರ (31) ಮತ್ತು ಶ್ರೀಶೈಲ ಶಂಕ್ರೇಪ್ಪ ಬಿರಾದಾರ (31). ಇವರು ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬೈಕು ಕಳ್ಳತನ ಮಾಡಿದ ಆರೋಪದಿಂದ ಬಂಧನಕ್ಕೊಳಗಾಗಿದ್ದಾರೆ.

ಪೊಲೀಸರು ನಡೆಸಿದ ವಿಶೇಧ ಕಾರ್ಯಾಚರಣೆಯ ಫಲಿತಾಂಶವಾಗಿ ಈ ಸಾಧ್ಯವಾಗಿದೆ. ಈ ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಎನ್.ಬಿ. ಉಪ್ಪಲದಿನ್ನಿ, ಆಸೀಫ್ ಗುಡಗುಂಟಿ, ಎಸ್. ತೆಲಗಾಂವ, ಲಕ್ಷ್ಮಣ ಬಿರಾದಾರ, ರಮೇಶ ಜಾಧವ, ಸಂತೋಷ ಮೇಲಸಕ್ರಿ, ಆನಂದ ಹಿರೇಕುರಬರ, ಎಸ್.ಆರ್. ಪೂಜಾರಿ ಮತ್ತು ಸುರೇಶ ಕುಂಬಾರ ಅವರುಗಳು ಪ್ರಮುಖ ಪಾತ್ರ ವಹಿಸಿದ್ದರು.

ಜಿಲ್ಲಾ ಪೊಲೀಸ್ ಅಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ಆರೋಪಿಗಳ ಮೇಲೆ ಮುಂದುವರೆದ ತನಿಖೆಯೊಂದಿಗೆ, ಇನ್ನೂ ಹೆಚ್ಚಿನ ಪ್ರಕರಣಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಬಹುದು ಎಂದು ಪೊಲೀಸರು ನಿರೀಕ್ಷಿಸಿದ್ದಾರೆ.

Tags: theft case, bike theft, Vijayapura Police, crime news, arrest


SHARE

By ANAND BABU TALAWAR

ನಿರ್ದೇಶಕ, ಮುಖ್ಯ ಸಂಪಾದಕರು ಮತ್ತು ಮಾಲಿಕ: ಶ್ರೀ ಆನಂದ ಬಾಬು ತಳವಾರ ಅವರು ಈ TV 2 ನ್ಯೂಸ್ ಕನ್ನಡದ ನಿರ್ದೇಶಕರಾಗಿದ್ದು, ಮುಖ್ಯ ಸಂಪಾದಕರಾಗಿಯೂ ಮತ್ತು ಮಾಲಿಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮರ್ಥ ನಾಯಕತ್ವದೊಂದಿಗೆ ನಿಷ್ಪಕ್ಷಪಾತ ಸುದ್ದಿಯನ್ನು ಜನತೆಗೆ ತಲುಪಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಕನ್ನಡದ ಮಾಧ್ಯಮ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಅನುಭವ ಹೊಂದಿರುವ ಇವರು, ಸಮರ್ಥ ಸಂಪಾದಕೀಯ ತೀರ್ಮಾನಗಳ ಮೂಲಕ ನಿಜವಾದ ಮಾಹಿತಿ ನೀಡಲು ಸದಾ ಪ್ರಯತ್ನಿಸುತ್ತಿದ್ದಾರೆ.

Leave a Reply

Your email address will not be published. Required fields are marked *