ಕರ್ನಾಟಕ ಜಾತಿ ಗಣತಿ: ಸಂಪೂರ್ಣ ವಿವರಗಳು
ವಿಜಯಪೂರ, ಸೆಪ್ಟೆಂಬರ್ ೨೨: ಹಲವಾರು ವಿವಾದಗಳು ಮತ್ತು ಗೊಂದಲಗಳ ನಡುವೆ ಕರ್ನಾಟಕ ಸರ್ಕಾರ ಸೆಪ್ಟೆಂಬರ್ ೨೪ರಿಂದ ರಾಜ್ಯವ್ಯಾಪಿ ಜಾತಿ ಗಣತಿ (ಸಾಮಾಜಿಕ-ಆರ್ಥಿಕ ಜಾತಿ ಗಣತಿ) ನಡೆಸಲು ತೀರ್ಮಾನಿಸಿದೆ. ವಿವಿಧ ಸಮುದಾಯಗಳ ಒತ್ತಡದ ನಂತರ ಸರ್ಕಾರವು ಗಣತಿ ಫಾರ್ಮ್ಗಳಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಉಪಜಾತಿಗಳ ಹೆಸರುಗಳನ್ನು ಸೇರಿಸದಿರಲು ನಿರ್ಧರಿಸಿದೆ. ಇದೇ ರೀತಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ತೀವ್ರ ವಿರೋಧದ ನಂತರ ೩೩ ಜಾತಿಗಳನ್ನು ತಾತ್ಕಾಲಿಕವಾಗಿ ಗಣತಿ ಪಟ್ಟಿಯಿಂದ ಹೊರತುಹಾಕಿದೆ.
ಗಣತಿಯ ಪ್ರಮುಖ ಉದ್ದೇಶ: ಈ ಗಣತಿಯ ಮೂಲಕ ರಾಜ್ಯದ ವಿವಿಧ ಜಾತಿ ಮತ್ತು ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸರ್ಕಾರವು ಉದ್ದೇಶಿಸಿದೆ. ಇದರ ಆಧಾರದ ಮೇಲೆ ಭವಿಷ್ಯದಲ್ಲಿ ಆರ್ಥಿಕ ಮತ್ತು ಸಾಮಾಜಿಕ ನೀತಿಗಳನ್ನು ರೂಪಿಸಲು ಉದ್ದೇಶಿಸಲಾಗಿದೆ.

ಗಣತಿಗೆ ಅಗತ್ಯವಾದ ದಾಖಲೆಗಳು: ಗಣತಿಅಧಿಕಾರಿಗಳು ಮನೆಗಳಿಗೆ ಭೇಟಿ ನೀಡಿದಾಗ ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಡಲು ನಾಗರಿಕರಿಗೆ ಸರ್ಕಾರದಿಂದ ಸೂಚಿಸಲಾಗಿದೆ:
· ರೇಷನ್ ಕಾರ್ಡ್
· ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
· ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್
· ಮತದಾರರ ಗುರುತಿನ ಚೀಟಿ (ಎಲೆಕ್ಷನ್ ಐಡಿ ಕಾರ್ಡ್)
ಗಣತಿಯಲ್ಲಿ ಕೇಳಲಾಗುವ ೬೦ ಪ್ರಶ್ನೆಗಳ ವಿವರ: ಗಣತಿಅಧಿಕಾರಿಗಳು ಮನೆಗಳಿಗೆ ಭೇಟಿ ನೀಡಿ ಸುಮಾರು ೬೦ ಪ್ರಶ್ನೆಗಳನ್ನು ಕೇಳಲಿದ್ದಾರೆ. ಇವುಗಳಲ್ಲಿ ಪ್ರಮುಖವಾಗಿ ಈ ಕೆಳಗಿನ ವಿಷಯಗಳನ್ನು ಕೇಳಲಾಗುವುದು:
ವೈಯಕ್ತಿಕ ಮಾಹಿತಿ:
· ಮನೆಯ ಮುಖ್ಯಸ್ಥರ ಹೆಸರು
· ತಂದೆ ಮತ್ತು ತಾಯಿಯ ಹೆಸರು
· ಕುಟುಂಬದ ಕುಲಹೆಸರು
· ಮನೆ ವಿಳಾಸ ಮತ್ತು ಸಂಪರ್ಕ ಸಂಖ್ಯೆ
· ರೇಷನ್ ಕಾರ್ಡ್ ಮತ್ತು ಆಧಾರ್ ಸಂಖ್ಯೆ
· ಮತದಾರರ ಗುರುತಿನ ಚೀಟಿ ಸಂಖ್ಯೆ
· ಕುಟುಂಬದ ಒಟ್ಟು ಸದಸ್ಯರು
· ಧರ್ಮ ಮತ್ತು ಜಾತಿ/ಉಪಜಾತಿ
· ಜಾತಿ ವರ್ಗ (SC/ST/OBC/General/Other)
· ಜಾತಿ ಪ್ರಮಾಣಪತ್ರದ ವಿವರ
· ಜನ್ಮ ದಿನಾಂಕ ಮತ್ತು ವಯಸ್ಸು
· ಲಿಂಗ ಮತ್ತು ವೈವಾಹಿಕ ಸ್ಥಿತಿ
· ಜನ್ಮ ಸ್ಥಳ
ಶೈಕ್ಷಣಿಕ ಮಾಹಿತಿ:
· ವಿದ್ಯಾಭ್ಯಾಸದ ಮಟ್ಟ
· ಮನೆಯಲ್ಲಿ ಓದಲು ಬಲ್ಲವರ ಸಂಖ್ಯೆ
· ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆಯೇ?
· ಶಾಲೆಯ ಪ್ರಕಾರ (ಸರ್ಕಾರಿ/ಖಾಸಗಿ)
· ಮನೆಯಲ್ಲಿ ಶಾಲೆ ಬಿಟ್ಟವರಿದ್ದಾರೆಯೇ?
ಆರ್ಥಿಕ ಮಾಹಿತಿ:
· ಮನೆಯ ಮುಖ್ಯ ಉದ್ಯೋಗ
· ಉದ್ಯೋಗದಲ್ಲಿರುವವರ ಸಂಖ್ಯೆ
· ಕೆಲಸದ ಪ್ರಕಾರ (ಸರ್ಕಾರಿ/ಖಾಸಗಿ)
· ನಿರುದ್ಯೋಗಿಗಳಿದ್ದಾರೆಯೇ?
· ದಿನಸಿ ಆದಾಯ ಮತ್ತು ತಿಂಗಳ ಆದಾಯ
· ತಿಂಗಳ ಖರ್ಚು
· ಸಾಲದ ವಿವರ
· BPL ಕಾರ್ಡ್ ಇದೆಯೇ?
· ಪಿಂಚಣಿ ಪಡೆಯುತ್ತಿದ್ದಾರೆಯೇ?
ಆಸ್ತಿ ಮತ್ತು ಸೌಲಭ್ಯಗಳ ಮಾಹಿತಿ:
· ಒಟ್ಟು ಜಮೀನಿನ ವಿವರ
· ಜಮೀನಿನ ಪ್ರಕಾರ (ಕೃಷಿ/ನಿವಾಸಿ)
· ಮನೆ ಸ್ವಂತದ್ದೇ ಅಥವಾ ಬಾಡಿಗೆ?
· ಮನೆಯ ಪ್ರಕಾರ (ಕಚ್ಚಾ/ಪಕ್ಕಾ)
· ವಿದ್ಯುತ್ ಸಂಪರ್ಕ ಇದೆಯೇ?
· ಕುಡಿಯುವ ನೀರಿನ ಮೂಲ
· ಶೌಚಾಲಯ ಸೌಲಭ್ಯ
· ಮನೆಯ ಕೊಠಡಿಗಳ ಸಂಖ್ಯೆ
· ಇಂಟರ್ನೆಟ್/ಮೊಬೈಲ್ ಸೌಲಭ್ಯ
· ವಾಹನಗಳ ವಿವರ (ಸೈಕಲ್/ಬೈಕ್/ಕಾರು/ಟ್ರಾಕ್ಟರ್)
ಸರ್ಕಾರಿ ಯೋಜನೆಗಳ ಲಾಭ:
· ರೇಷನ್ ಸಬ್ಸಿಡಿ ಸಿಗುತ್ತಿದೆಯೇ?
· ವಸತಿ ಯೋಜನೆಯ ಲಾಭ ಪಡೆದಿದ್ದಾರೆಯೇ?
· ವಿದ್ಯಾರ್ಥಿವೇತನ ಪಡೆದಿದ್ದಾರೆಯೇ?
· ಮೀಸಲಾತಿ ಲಾಭ ಪಡೆದಿದ್ದಾರೆಯೇ?
· ಆರೋಗ್ಯ ಯೋಜನೆಯ ಲಾಭ ಇದೆಯೇ?
ಸಾಮಾಜಿಕ ಮಾಹಿತಿ:
· ಮನೆಯಲ್ಲಿ ವಿಧವೆಯಿದ್ದಾರೆಯೇ?
· ಅಂಗವಿಕಲರು ಇದ್ದಾರೆಯೇ?
· ಹಿರಿಯ ನಾಗರಿಕರು (೬೦+) ಇದ್ದಾರೆಯೇ?
· ಆರು ವರ್ಷದೊಳಗಿನ ಮಕ್ಕಳ ಸಂಖ್ಯೆ
· ಯುವಕರ (೧೮-೩೫) ಸಂಖ್ಯೆ
· ಸಾಮಾಜಿಕ ಸಂಘ/ಸಂಸ್ಥೆಯ ಸದಸ್ಯತ್ವ
· ನೋಂದಾಯಿತ ಮತದಾರರ ಸಂಖ್ಯೆ
· ಮತದಾನ ಮಾಡುವಿರೇ?
ಜಾತಿ ಆಧಾರಿತ ಅನುಭವ:
· ಜಾತಿ ಆಧಾರದ ಮೇಲೆ ಬೇಧಭಾವ ಅನುಭವಿಸಿದ್ದೀರಾ?
· ಜಾತಿ ಸಮೀಕ್ಷೆಯಿಂದ ನಿಮಗೆ ಏನು ಪ್ರಯೋಜನ ನಿರೀಕ್ಷಿಸುತ್ತೀರಿ?
ಸರ್ಕಾರವು ಎಲ್ಲಾ ನಾಗರಿಕರನ್ನು ಗಣತಿ ಅಧಿಕಾರಿಗಳೊಂದಿಗೆ ಸಹಕರಿಸಲು ಮತ್ತು ಅಗತ್ಯ ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿಡಲು ವಿನಂತಿಸಿದೆ. ಸೋಮವಾರದಿಂದ ಪ್ರಾರಂಭವಾಗುವ ಈ ಗಣತಿ ಕಾರ್ಯಕ್ಕೆ ನಾಗರಿಕರು ಸಹಕರಿಸಬೇಕಾಗಿ ಅಪೇಕ್ಷಿಸಲಾಗಿದೆ.

ಈ ಜಾತಿ ಗಣತಿಯಿಂದ ಕೇವಲ ಜಾತಿ-ಜಾತಿಗಳ ಮಧ್ಯ ಜಗಳಗಳು ಜಟಾಪಟಿ ಉಂಟಾಗಬಹುದು, ಕಡಿಮೆ ಜಾತಿ ಜನರು ಇರುವ ಜಾತಿಯ ಜನರನ್ನು ಖುದ್ದಾಗಿ ಸರ್ಕಾರ ಮತ್ತು ರಾಜಕಾರಣಿಗಳು ನಿರ್ಲಕ್ಷ ಮಾಡಬಹುದು, ಹೆಚ್ಚು ಜನರಿರುವ ಜಾತಿಗಳು ಬಲಾಡ್ಯ ಸಾಧಿಸಬಹುದು. ಜಾತಿ ಗಣತಿ ಒಂದೂ ನಿಟ್ಟಿನಲ್ಲಿ ಹಿಂದೂ-ಹಿಂದೂಗಳ ಮಧ್ಯ ಬಿರುಕು ಸೃಷ್ಟಿಸಲು ಮಾಡುತ್ತಿರುವಂತೆ ಗೋಚರಿಸುತ್ತಿದೆ. ಜಾತಿ ಬದಲಾಗಿ ಆರ್ಥಿಕ ಸಮೀಕ್ಷೆ ಮಾಡಿದ್ದರೆ ಒಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಲು ಸಾಧ್ಯವಾಗುತ್ತಿತ್ತು. ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಉದ್ಯೋಗ, ಆರ್ಥಿಕ ಪ್ರಗತಿ ಪರಿಶೀಲನಾ ಕಾರ್ಯಕ್ರಮ ಮಾಡಿ ಅವರ ಏಳಿಗೆಗೆ ಕ್ರಮ ಕೈಗೊಳ್ಳಬೇಕು ಹಿಂದುಳಿದ ವರ್ಗದ ಜನರ ಉದ್ದಾರ ಮಾಡಬಹುದಾಗಿತ್ತು.
